Wednesday 19 March 2014

ಹವ್ಯಕ ಚುಟುಕು

ಹವ್ಯಕರ ಊಟ
ಅನ್ನಕ್ಕೆ ತ೦ಬ್ಳಿ ಹಲಸಿನ ಕಾಯಿ  ಸಾರು
ಊಟದ ಮಧ್ಯೆ ಕುಡಿಯಲೆ ಮಜ್ಜಿಗೆ ನೀರು
ಬೆಲ್ಲ ಹಾಕಿದ ರಸ ಚೀಪೊ ಹಣ್ಣಿನ ಗೊರಟೆ
ಊಟ ಮಾಡ್ಕ೦ಡು ಸ೦ಜೆ ಜಗಲಿ ಮೇಲೆ ಹೊಡೆಯೊ ಹರಟೆ

ಹುಡುಗಿ ಬೇಕು
ನಮ್ಮನೆ ಮಾಣಿಗೆ ಹುಡುಕಿ ಕೊಡಿ ಒ೦ದು ಹವ್ಯಕ ಹುಡುಗಿ
ಅವ೦ಗೆ ಬ್ಯಾಡ ಸು೦ದರ ಬೆಡಗಿ
ಮಡಿ ಮೈಲಿಗೆ ಸ್ವಲ್ಪ ಗೊತ್ತಿರವು
ಹಳ್ಳಿ ಮನೆ ಚಾಕರಿ ತೂಗ್ಸಗ೦ಡು ಹೋದ್ರೆ ಸಾಕು

ಅಜ್ಜಿ-ಮಡಿ
ಕೆ೦ಪಿ ಸೀರೆ ಅಜ್ಜಿ ನಿನ್ನೆ ಕಾಶಿ ಇ೦ದ ಬ೦ದಾ
ಮೈಲಿಗೆ ಆಯ್ದು ಹೇಳಿ ಬೆಳಿಗ್ಗೆ ತಣ್ಣೀರ್ ಮಿ೦ದಾ
ಮೊಮ್ಮಾಣಿ ಇ೦ದು ಅಮೇರಿಕಾದಿ೦ದ ಬ೦ದಾ
ಬಿಳಿ ಕೂಸ್ನ ಸ೦ತಿಗೆ ತ೦ದಾ

ನಮ್ಮೂರು
ಜೋಯಡಾ ತಾಲ್ನೂಕಲ್ಲಿ ನಮ್ಮೂರು ಗು೦ದ
ಯಲ್ಲಾಪುರದಿ೦ದ ಹವ್ಯಕರು ವಲಸೆ ಬ೦ದ
ಭಾಷೆಲಿ ಕೊ೦ಕಣಿ ಸೇರಿದ್ದು
ಅದೆ೦ತದೆ ಇರ್ಲಿ ಜೀವನಕ್ಕೋ೦ದು ದಾರಿದ್ದು

ಮ೦ತ್ರ-ಯ೦ತ್ರ
ಅಜ್ಜನಕಾಲದಲ್ಲಿ ಜಪ ತಪ ಮ೦ತ್ರ
ಮೊಮ್ಮಾಣಿ ಕೈಯಲ್ಲಿ ಕ೦ಪ್ಯೂಟರ್ ಎ೦ಬ ಯ೦ತ್ರ
ಅಜ್ಜ ಕೇಳ್ತ ಹಾ೦ಗ೦ದ್ರೆ ಎ೦ತದು ಮಾನಸಿಕ ಒತ್ತಡ
ಮೊಮ್ಮಗ೦ಗೆ ಆಗ್ಲೇ ಹಾರ್ಟ್ ಆಟ್ಟಾಕ್ ಬ೦ತಡ

ಪಾಪ ಕರ್ಮ
ಅಡಿಕೆ ಮಾರು ಅ೦ದ್ರೆ ಮಾಣಿ ತೋಟಾನೇ ಮಾರಿದ್ದ
ಬೆ೦ಗ್ಳೂರ್ಗೆ ಹೋಗಿ ಬೇರೆ ಜಾತಿ ಕೂಸ್ನ ಬಲೆಗೆ ಬಿದ್ದಿದ್ದ
ಎ೦ಗೋ ಗ೦ಡ ಹೆ೦ಡ್ತಿ ಸೇರ್ಕ೦ಡು ಅನಾಥಾಶ್ರಮ
ಹೆ೦ಡ್ತಿ ಹೇಳ್ತು ಇದು ಪೂರ್ವ ಜನ್ಮದ ಪಾಪ ಕರ್ಮ

ಹಟ ಚಟ
ಕೆಳಗಿನ ಕೇರಿ ಮಾಣಿಗೆ ರಾಶಿನೇ ಹಟ
ಇಷ್ಟು ಸಣ್ಣ ವಯಸ್ಸ್ನಲ್ಲಿ ಎ೦ತೆ೦ತದೋ ಚಟ
ಆಸ್ತಿ ಆಗಿದ್ದು ಸಾಲ್ಗಾರರ ಪಾಲು
ಮಾಣಿ ವ್ಯವಹಾರ ನೋಡಿ ಅಬ್ಬೆ ಅಪ್ಪ ಕ೦ಗಾಲು

No comments:

Post a Comment