Wednesday 19 March 2014

ಹವ್ಯಕ ಚುಟುಕು

ಹವ್ಯಕರ ಊಟ
ಅನ್ನಕ್ಕೆ ತ೦ಬ್ಳಿ ಹಲಸಿನ ಕಾಯಿ  ಸಾರು
ಊಟದ ಮಧ್ಯೆ ಕುಡಿಯಲೆ ಮಜ್ಜಿಗೆ ನೀರು
ಬೆಲ್ಲ ಹಾಕಿದ ರಸ ಚೀಪೊ ಹಣ್ಣಿನ ಗೊರಟೆ
ಊಟ ಮಾಡ್ಕ೦ಡು ಸ೦ಜೆ ಜಗಲಿ ಮೇಲೆ ಹೊಡೆಯೊ ಹರಟೆ

ಹುಡುಗಿ ಬೇಕು
ನಮ್ಮನೆ ಮಾಣಿಗೆ ಹುಡುಕಿ ಕೊಡಿ ಒ೦ದು ಹವ್ಯಕ ಹುಡುಗಿ
ಅವ೦ಗೆ ಬ್ಯಾಡ ಸು೦ದರ ಬೆಡಗಿ
ಮಡಿ ಮೈಲಿಗೆ ಸ್ವಲ್ಪ ಗೊತ್ತಿರವು
ಹಳ್ಳಿ ಮನೆ ಚಾಕರಿ ತೂಗ್ಸಗ೦ಡು ಹೋದ್ರೆ ಸಾಕು

ಅಜ್ಜಿ-ಮಡಿ
ಕೆ೦ಪಿ ಸೀರೆ ಅಜ್ಜಿ ನಿನ್ನೆ ಕಾಶಿ ಇ೦ದ ಬ೦ದಾ
ಮೈಲಿಗೆ ಆಯ್ದು ಹೇಳಿ ಬೆಳಿಗ್ಗೆ ತಣ್ಣೀರ್ ಮಿ೦ದಾ
ಮೊಮ್ಮಾಣಿ ಇ೦ದು ಅಮೇರಿಕಾದಿ೦ದ ಬ೦ದಾ
ಬಿಳಿ ಕೂಸ್ನ ಸ೦ತಿಗೆ ತ೦ದಾ

ನಮ್ಮೂರು
ಜೋಯಡಾ ತಾಲ್ನೂಕಲ್ಲಿ ನಮ್ಮೂರು ಗು೦ದ
ಯಲ್ಲಾಪುರದಿ೦ದ ಹವ್ಯಕರು ವಲಸೆ ಬ೦ದ
ಭಾಷೆಲಿ ಕೊ೦ಕಣಿ ಸೇರಿದ್ದು
ಅದೆ೦ತದೆ ಇರ್ಲಿ ಜೀವನಕ್ಕೋ೦ದು ದಾರಿದ್ದು

ಮ೦ತ್ರ-ಯ೦ತ್ರ
ಅಜ್ಜನಕಾಲದಲ್ಲಿ ಜಪ ತಪ ಮ೦ತ್ರ
ಮೊಮ್ಮಾಣಿ ಕೈಯಲ್ಲಿ ಕ೦ಪ್ಯೂಟರ್ ಎ೦ಬ ಯ೦ತ್ರ
ಅಜ್ಜ ಕೇಳ್ತ ಹಾ೦ಗ೦ದ್ರೆ ಎ೦ತದು ಮಾನಸಿಕ ಒತ್ತಡ
ಮೊಮ್ಮಗ೦ಗೆ ಆಗ್ಲೇ ಹಾರ್ಟ್ ಆಟ್ಟಾಕ್ ಬ೦ತಡ

ಪಾಪ ಕರ್ಮ
ಅಡಿಕೆ ಮಾರು ಅ೦ದ್ರೆ ಮಾಣಿ ತೋಟಾನೇ ಮಾರಿದ್ದ
ಬೆ೦ಗ್ಳೂರ್ಗೆ ಹೋಗಿ ಬೇರೆ ಜಾತಿ ಕೂಸ್ನ ಬಲೆಗೆ ಬಿದ್ದಿದ್ದ
ಎ೦ಗೋ ಗ೦ಡ ಹೆ೦ಡ್ತಿ ಸೇರ್ಕ೦ಡು ಅನಾಥಾಶ್ರಮ
ಹೆ೦ಡ್ತಿ ಹೇಳ್ತು ಇದು ಪೂರ್ವ ಜನ್ಮದ ಪಾಪ ಕರ್ಮ

ಹಟ ಚಟ
ಕೆಳಗಿನ ಕೇರಿ ಮಾಣಿಗೆ ರಾಶಿನೇ ಹಟ
ಇಷ್ಟು ಸಣ್ಣ ವಯಸ್ಸ್ನಲ್ಲಿ ಎ೦ತೆ೦ತದೋ ಚಟ
ಆಸ್ತಿ ಆಗಿದ್ದು ಸಾಲ್ಗಾರರ ಪಾಲು
ಮಾಣಿ ವ್ಯವಹಾರ ನೋಡಿ ಅಬ್ಬೆ ಅಪ್ಪ ಕ೦ಗಾಲು

Sunday 21 April 2013

First

ಮದುವೆ 

ಮಗನ ಮದುವೆಯಾಗಿ 
ಸೊಸೆಯನ್ನು ಮನೆತುಂಬಿಸಿಕೊಳ್ಳುವ 
ಖುಷಿ
ಮಗಳು ಮದುವೆಯಾಗಿ 
ಗಂಡನ ಮನೆಗೆ ಹೊರಟು ನಿಂತಾಗ 
ಎನೋ ಕಸಿವಿಸಿ 


 ಹಣೆಬರಹ 

ಮದುವೆ  ಮಾಡುವಾಗ ಜಾತಕ
ಮನೆ ಕಟ್ಟುವಾಗ ವಾಸ್ತು 
ನಮ್ಮ ಹಣೆಬರಹ ಹೇಗಿದೆಯೊ  
ದೇವರಿಗೆ ಗೊತ್ತು 

ಯಾಕೆ ?

ಅವನ ಹೆಂಡತಿ ಸತ್ತಾಗ 
ಹುಡುಗಿ ಹುಡುಕಿ ಮಾಡಿದರು 
ಮದುವೆ
ಅವಳ ಗಂಡ ಸತ್ತಾಗ 
ಮಂಗಲ  ಸೂತ್ರ ಕಾಲುಂಗುರ ತೆಗಿಸಿ 
ಕುಂಕುಮ ಅಳಿಸಿದರು 
ಕಾರಣ ಅವಳು ವಿಧವೆ


ಆಸೆ 
****
ನನ್ನ ಹೆಂಡತಿಗೆ ಬಂಗಾರದಾಸೆ 
ನಾನು ಇಷ್ಟ ಪಡುವುದು
ಶುದ್ಧ ಶಾಖಾಹಾರಿ ಹೋಟೆಲಿನ
ಮಸಾಲದೋಸೆ

ನನ್ನೂರು
********
ದಾಂಡೇಲಿ ಅಭಯಾರಣ್ಯದ ನಡುವೆ ನಮ್ಮ ಮನೆ
ಮಳೆಗಾಲದಲ್ಲಿ ಹಸಿರಿನ ನಡುವೆ ಹಳದಿ ಭತ್ತದ ತೆನೆ
ಗುಡ್ಡದ ಮೇಲಿಂದ ವರುಷವಿಡೀ ಹರಿಯುವುದು ನೀರು
ಯಂತ್ರಗಳ ಸಹಾಯವಿಲ್ಲದೆ ಜೀವಜಲ ಹರಿಸಿ ಬಿಟ್ಟವರು ಯಾರು 


ಮದುವೆಯ ಜೀವನ
******************
ಗಂಡ ಹೆಂಡತಿ ಅರ್ಥ ಮಾಡಿಕೊಂಡರೆ ಜೀವನ ಸರಳ
ಇಲ್ಲವಾದರೆ ಪ್ರತಿದಿನವೂ ಜಗಳ
ಗಂಡನಿಗೆ ಹೆಂಡತಿ ಸಹಕರಿಸುತ್ತಿರಬೇಕು
ಗಂಡ ಹೆಂಡತಿಯ ಮನ ಅರಿತಿರಬೇಕು

ಕೊಡೆ-ಜಡೆ
************
ಅಪ್ಪನ ಕಾಲದ ಕೊಡೆ
ನೆನಪಿಸುವುದು ಮಗಳ ಉದ್ದನೆಯ ಜಡೆ
ಈಗ ಮಗಳ ಜಡೆ
ಚೈನಾದ ಮಡಚುವ ಕೊಡೆ

ಸಂತೃಪ್ತ ಜೀವನ
***************
ಕೊನೆವರೆಗೆ ಕಣ್ಣು ಕಿವಿ ಕಾಲು ಸರಿ ಇದ್ದರೆ
ನಾನೇ ಈ ದೇಹ ಸಾಮ್ರಾಜ್ಯದ ದೊರೆ

ಮಂತ್ರಿ - ಕಂತ್ರಿ
**************
ನಮ್ಮೂರಲ್ಲಿ ಕಟ್ಟುತ್ತಾರಂತೆ ಹೈಸ್ಕೂಲು
ಮಂತ್ರಿಗಳು ಬಂದು ಹಾಕಿದ್ದಾರೆ ಅಡಿಗಲ್ಲು
ಈಗ ಹೈಸ್ಕೂಲು ಸುದ್ದಿಯಿಲ್ಲ ಯಾರ ಬಾಯಲ್ಲು
ಅಡಿಗಲ್ಲು ಸೇರಿದೆ ಯಾರದೋ ಬಚ್ಚಲು

ರೈಲು ಪ್ರಯಾಣ
***************
ಈ ಜೀವನದ ಸಂತೆ ಓಡುವಾ ರೈಲಿನಂತೆ
ಏರ್ ಕಂಡಿಷನ್ ಕೆಲವರಿಗೆ ಬರ್ತು
ಮತ್ತು ಕೆಲವರು ಪ್ರಯಾಣಿಸಬೇಕು
ಜೆನೆರಲಲ್ಲಿ ನಿಂತು

ರೈತಾಪಿ
*********
ರೈತನ ಜೀವನಾಧಾರ ಹೊಲ
ಅಭಿವ್ರದ್ದಿಗೆ ಸರಕಾರ ಕೊಡುವುದು ಸಾಲ.
ಸಾಲ ತೀರಿದರೆ ಮಂಜೂರಾಗುವುದು ಮತ್ತೆ
ತೀರಿಸಲಾಗದಿದ್ದರೆ ರೈತನ ಆತ್ಮಹತ್ಯೆ.
ಮನವಿ
******
ಪ್ರಾಣಿಪ್ರಿಯರೇ ಬೆಕ್ಕು ನಾಯಿಗಳನ್ನು ಸಾಕಿ
ದಯಮಾಡಿ ಪಕ್ಷಿಗಳನ್ನು ಪಂಜರದಿಂದ ಹೊರಹಾಕಿ
ಬೆಕ್ಕು ಇಲಿ ಹಿಡಿಯಲಿ
ನಾಯಿ ಮನೆ ಕಾಯಲಿ
ಪಕ್ಷಿಗಳು ಸ್ವಚ್ಛಂಧ ಆಕಾಶದಲಿ ಹಾರಾಡಲಿ

ಸ್ವಂತ ಬಾಡಿಗೆ ಮನೆ
*************************
ನಮ್ಮವಳು ಎಂದಳು ಮದುವೆಯಾಗಿ
ಮೂವತ್ತು ವರ್ಷವಾಯ್ತು ಸ್ವಂತ ಮನೆ ಇಲ್ಲ
ನಾನೆಂದೆ ಅಕ್ಕ ಪಕ್ಕದವರೊಂದಿಗೆ ಹೊಂದಾಣಿಕೆ ಆಗದಿದ್ದಾಗ ಆಗದಿದ್ದಾಗ
ಬಾಡಿಗೆ ಮನೆ ಖಾಲಿ ಮಾಡಬಹುದಲ್ಲ 



ಮಾವನ ಇನ್ನಷ್ಟು ರಚನೆಯೊಂದಿಗೆ 

ಕೆಲಸ - ಜೀವನ 
**************
ನೌಕರಿಗಾಗಿ ಊರೂರು ತಿರುಗಾಟ 
ಇದು ನನ್ನ ಬದುಕಿನ ಹೋರಾಟ
ಮದ್ಯ ಮೇಲಧಿಕಾರಿಗಳ ಕಾಟ 
ಆದರೂ ಬಿಡಲಿಲ್ಲ ನೌಕರಿ ಮಾಡುವ ಹಠ 

ಪ್ರಕೃತಿಯ ನಿಯಮ 
*****************
ಮಳೆಗಾಲದಲ್ಲಿ ಮಳೆ ಚಳಿಗಾಲದಲ್ಲಿ ಚಳಿ
ಇದು ನಮಗೆ ಪ್ರಕೃತಿ ಕೊಟ್ಟ ಬಳುವಳಿ 
ಬೇಸಿಗೆಯ ಬಿಸಿಲಿಗೆ ಶಾಪ 
ಏಕಿಷ್ಟು ಪರಿಸರದ ಮೇಲೆ ಕೋಪ 

ಮ(ನೆ)ನದೊಡತಿ 
****************
ಇಷ್ಟು ದಿನ ಎಲ್ಲಿದ್ದೆ ಸುಶೀಲೆ 
ಹಚ್ಚಿದೆ ನನ್ನ ಮನೆಲಿ ಆರಿದ್ದ ಒಲೆ 
ತೋರಿಸಿ ಕೊಟ್ಟೆ ಅಡಿಗೆ ಮಾಡುವ ಕಲೆ 
ಈಗ ಸಿಕ್ಕಿದೆ ನನ್ನ ಬದುಕಿಗೆ ಒಂದು ನೆಲೆ 

ಜೋಳದ ರೊಟ್ಟಿ 
***************
ಬಿಜಾಪುರದ ಜೋಳದ ರೊಟ್ಟಿ 
ರುಚಿಯಾದರೂ ಈಗ ಬಹು ತುಟ್ಟಿ 
ಪಲ್ಯ ಮಾಡುತ್ತಾರೆ ಹಾಕಿ ಬದನೆಕಾಯಿ 
ತಿಂದವರೆಲ್ಲರೂ  ಚಪ್ಪರಿಸಬೇಕು ಬಾಯಿ 

ನವನಗರ 
*********
ಬಾಗಲಕೋಟೆಯ ನವನಗರ 
ಅಗಲವಾದ ರಸ್ತೆ ತುಂಬ ಸುಂದರ 
ರಸ್ತೆ ಅಕ್ಕ ಪಕ್ಕ ಬೆಳೆಸಿದ್ದಾರೆ ಗಿಡಮರ 
ಉಳಿಸಿದ್ದಾರೆ ಪರಿಸರ 

ಇಷ್ಟ-ಕಷ್ಟ 
*********
ನಾನು ಇಷ್ಟ ಪಡುವುದು 
ಟಿಕಲಿ ಯುಗದಲ್ಲೂ ನನ್ನ ಮಡದಿಯ ಬೊಟ್ಟು 
ನನಗೆ ಕಷ್ಟವಾಗುವುದು 
ಸಣ್ಣ ವಿಷಯಕ್ಕೆ ಅವಳಿಗೆ ಬರುವ ದೊಡ್ಡ ಸಿಟ್ಟು 

 ಮಾವನ ಇನ್ನೂ ಅನೇಕ ರಚನೆಗಳೊಂದಿಗೆ 

ಪೃಕೃತಿ (ವಿ)ಕೋಪ 
******************
ಎಲ್ಲಿ ನೋಡಿದಲ್ಲಿ ಅನಾಚಾರ ,ಪಾಪ 
ನೋಡಿ ಕೇದಾರನಾಥನಿಗೆ ಬಂದಿತ್ತೇ ಕೋಪ 
ಅದಕ್ಕಾಗಿ ಕೊಟ್ಟಿದ್ದಾನೆ ಉಗ್ರ ಶಾಪ 
ಈಗ ಕೇದಾರವಾಗಿದೆ ಮೃತ್ಯು ಕೋಪ  

ಲೇಟು - ಏಟು 
*************
ಗಂಡ ಸಾಫ್ಟವೇರ್ ಎಂಜೀನೀರ್ 
ಹೆಂಡತಿ ಪ್ರೈಮರಿ ಟೀಚರ್ 
ಇವ ಪ್ರಾಜೆಕ್ಟ್ ಇದ್ದಾಗ ಬರುವುದು ಲೇಟು 
ಅವಳು ಸಿಟ್ಟಿನಲ್ಲಿ ಶಾಲೆ ಮಕ್ಕಳಿಗೆ ಕೊಡುವಳು ಏಟು 

ಕಾರು-ಬಾರು 
*************
ಸಾಯಂಕಾಲ ಆತ ಓಡಿಸುತ್ತಿದ್ದ  ಕಾರು
ರಸ್ತೆಯ  ಪಕ್ಕದಲ್ಲಿ ಕಂಡಿತು ಬಾರು
ಕಾರಿನಿಂದ ಇಳಿದು ನಿಧಾನ ಒಳ ಹೊಕ್ಕ 
ಎಷ್ಟು ಕುಡಿದನೋ ಸಿಗಲಿಲ್ಲ ಲೆಕ್ಕ   

ಕನಸು 
***********
ದಿನದ ಕೆಲಸ ಮಾಡಿ ಸಂಜೆ ಮನೆ ಸೇರಿದ್ದೆ 
ಮಡದಿ ಬಡಿಸಿದ್ದುಂಡು ನಿದ್ದೆಗೆ ಜಾರಿದ್ದೆ 
ಕನಸಿನಲಿ ಹಕ್ಕಿಯಂತೆ ಮೇಲೆ ಮೇಲೆ ಹಾರಿದ್ದೆ 
ಮಧ್ಯ ರಾತ್ರಿಯಲ್ಲಿ ನಾನು ಮಂಚದಿಂದ ಕೆಳಗೆ ಬಿದ್ದಿದ್ದೆ 

ನೆಂಟಸ್ತನ 
*********
ಅಲ್ಪದಿನದ ಬಾಳಿನಲ್ಲಿ ಸ್ವಲ್ಪ ದಿನ ಕಳೆದಿದೆ 
ಮಕ್ಕಳ ಮದುವೆಯಿಂದ ನೆಂಟಸ್ತನ ಬೆಳೆದಿದೆ 
ವ್ಯವಹಾರದಲ್ಲಿ ಯಾರಿಗೂ ಬೇಜಾರಗದಿದ್ದರೆ ಸಾಕು 
ಕೊನೆವರೆಗೂ ನೆಂಟಸ್ತನ ಉಳಿಸಿಕೊಳ್ಳಬೇಕು 

ಹೆಂಡತಿ 
********
ಗೆಳತಿಯೊಂದಿಗೆ ಸರಸ 
ಹೆಂಡತಿಯೊಂದಿಗೆ ವಿರಸ 
ಹಣವಿರುವವರೆಗೆ ಗೆಳತಿ 
ಕೊನೆಗೆ ಹೆಂಡತಿಯೇ ಗತಿ 

ಆರೋಗ್ಯವೇ ಭಾಗ್ಯ 
*****************
ಕಾಪಾಡಿಕೊಳ್ಳಿ ನಿಮ್ಮ ಆರೋಗ್ಯ 
ಅದುವೇ ಜೀವನದಲ್ಲಿ ಗಳಿಸುವ ದೊಡ್ಡ ಭಾಗ್ಯ 
ಗಳಿಸುತ್ತ ಹೋದರೆ ಅಕ್ರಮ ಆಸ್ತಿ 
ಮರ್ಯಾದೆಯೂ ಹಾಳು ತಲೆಬಿಸಿಯೂ ಜಾಸ್ತಿ 

ಆಸ್ತಿ
ಅವನಿಗಿತ್ತು ಶ್ರೀಮ೦ತಿಕೆಯ ಗತ್ತು
ನಿಜವಾಗಿಯೂ ಅದು ಪರರ ಸ್ವತ್ತು!
ಆಸ್ತಿಗಾಗಿ ಕೋರ್ಟಿನಲ್ಲಿ ಕೇಸು ನಡೆಯುತ್ತಿತ್ತು,
ಈಗ ಎಲ್ಲ ಬೇರೆಯವರ ಪಾಲಯ್ತು.

ಆಶೆ
ಆಶೆ ಎ೦ಬ ಕುದುರೆ ಹತ್ತಿ
ಮೂವತ್ತನಾಲ್ಕು ವರ್ಷ ಊರೂರು ಸುತ್ತಿ
ಹಿ೦ದಿರುಗಿದ್ದೇನೆ ಬರೀಗೈಲಿ
ಎಲ್ಲರೂ ಮಾಡುತ್ತಿದ್ದಾರೆ ನನ್ನನ್ನು ಗೇಲಿ

ಅನುಬ೦ಧ
ಮದುವೆ ಅನುರಾಗದ ಅನುಬ೦ಧ
ಗ೦ಡ-ಹೆ೦ಡತಿ ಜಗಳ ಇರಬೇಕು ತೀಡಿದ೦ಗ ಗ೦ಧ
ವಿಪರೀತಕ್ಕೆ ಹೋದರೆ ವಿಛ್ಹೇಧನ,
ಅರಿತು ಬಾಳಿದರೆ ಸ್ವರ್ಗಕ್ಕೆ ಸಮಾನ.

ನಮ್ಮೂರು
ಹಳ್ಳಿಯಲ್ಲಿ ನಮ್ಮದು ಹ೦ಚಿನ ಮನೆ,
ತೋಟದ ತು೦ಬ ಕಾಳಮೆಣಸು-ಏಲಕ್ಕಿ-ಬಾಳೆಗೊನೆ.
ಮಳೆಗಾಲದಲ್ಲಿ ಎಲ್ಲಿ ನೋಡಿದರೂ ಹಸಿರು,
ಅ೦ಗಳ ದಾರಿ ರಸ್ತೆಗಳೆಲ್ಲ ಕೆಸರು!

ಮುದುಕಿ
ಮುದುಕಿ ಮನೆ ಬಾಗಿಲಲ್ಲಿ ಕುಳಿತಿತ್ತು
ಸಾವು ಯಾವಾಗ ಬರುವುದೋ ಎ೦ದು ಕಾಯುತಿತ್ತು.
ಮೇಲಿ೦ದ ಹಲ್ಲಿ ಮೈಮೇಲೆ ಬಿತ್ತು,
ಮುದುಕಿ ಸತ್ತೇ ಹೋದೆ ಎ೦ಬ೦ತೆ ಚೀರಿತ್ತು..!

ಒಗ್ಗಟ್ಟು
ಬೆಲ್ಲದ ವಾಸನೆಗೆ ಇರುವೆಯೊ೦ದು ಬ೦ತು,
ಸ್ವಲ್ಪ ಸಮಯದಲ್ಲಿ ತನ್ನ ಬಳಗವನ್ನೆಲ್ಲ ಕರೆತ೦ತು
ಇರುವೆಗಿರುವ೦ತೆ ನಮ್ಮಲ್ಲಿದ್ದರೆ ಒಗ್ಗಟ್ಟು
ಬರುತ್ತಿತ್ತೇ ಈ ತರಹದ ಬಿಕ್ಕಟ್ಟು?

ಅರಮನೆ
ಹೆಣ್ಣಿಗಿರಬೇಕು ನಯವಿನಯ
ಗ೦ಡ, ಹೆ೦ಡತಿಗಾಗಿಯೆ ಮೀಸಲಿಡಬೇಕು ಸ್ವಲ್ಪ ಸಮಯ.
ಹೀಗಾದರೆ ಬಡವನ ಮನೆಯೂ ಅರಮನೆ,
ಹೊ೦ದಾಣಿಕೆ ಆಗದಿದ್ದರೆ ಅದು ಇಬ್ಬರಿಗೂ ಸೆರೆಮನೆ.

ಕುಡುಕ
ಕೊಡುತಾಯಿ ವರವ ಕುಡುಕನಲ್ಲದ ಗ೦ಡನ,
ಸಮಾಜದಲ್ಲಿ ಕುಡಿತ ಕೆಟ್ಟ ವ್ಯಸನ.
ಒಮ್ಮೆ ಕುಡಿತ ಅ೦ಟಿಕೊ೦ಡರೆ ಬಿಡಿಸುವುದು ಕಷ್ಟ,
ಕುಡುಕನಲ್ಲದ ಗ೦ಡ ಸಿಕ್ಕರೆ ಹೆಣ್ಣಿನ ಅದ್ರಷ್ಟ.

ಗುಟ್ಕಾ 

ಗುಟ್ಕಾ ನಿಷೇಧಿಸಿದೆ ಸರಕಾರ 
ಪಾನ್ ಅಂಗಡಿಗೆ ಕಮ್ಮಿ ಆಗಿದೆ ವ್ಯಾಪಾರ 
ಗುಟ್ಕ ನಶೆಯಲ್ಲಿ ಯಾರೂ ಹೆಂಡತಿ ಮಕ್ಕಳಿಗೆ ಹೊಡೆಯುವುದಿಲ್ಲ 
ಕುಡುಕನ ಹೆಂಡತಿ ಮಕ್ಕಳ ಗೋಳು ಕೇಳುವರಿಲ್ಲ 

ಲಾಲು 

ದನದ ಮೇವಿಗೆ ಮಂಜೂರಾದ ಹುಲ್ಲು 
ತಾನೇ ತಿಂದು ಮುಗಿಸಿದ್ದಾನೆ ಲಾಲು 
ಕೋರ್ಟಿನಲ್ಲಿ ಸಿಗಲಿಲ್ಲ ಬೇಲು 
ಐದು ವರ್ಷ ಶಿಕ್ಷೆಯಾಗಿ ಸೇರಿದ್ದಾನೆ ಜೈಲು 

ಕಣಿ 

ಹೇಳುತ್ತೇನೆ ಕೇಳಿ ಕಣಿ 
ಮೈಸೂರು ಬೆಂಗಳೂರು ರೈಲಲ್ಲಿ ತಗಣಿ 
ಬಿಜಾಪುರ ರಸ್ತೆಯೆಲ್ಲ ಸಗಣಿ 
ಬಳ್ಳಾರಿಯಲ್ಲಿ ಕಬ್ಬಿಣದ ಗಣಿ 

ಆಕರ್ಷಣೆ 

ಗಂಡ ಹೆಂಡರ ನಡುವೆ ಚಿಕ್ಕಪುಟ್ಟ ಘರ್ಷಣೆ 
ದಂಪತಿಗಳ ನಡುವೆ ಹೆಚ್ಚುವುದು ಆಕರ್ಷಣೆ 
ಪತಿ ಪತ್ನಿಯರ ನಡುವೆ ಇರಲಿ ಜಗಳದ ಗುಟ್ಟು 
ಯಾವಕಾರಣಕ್ಕೂ ಮಾಡಬೇಡಿ ಗುಟ್ಟು ರಟ್ಟು 

ಮಳೆಗಾಲ 

ಮಳೆಗಾಲ ಪ್ರಾರಂಭ ಆಕಾಶದಲಿ ಗುಡುಗು 
ಬಿಳಿಮೋಡದ ನಡುವೆ ಕಪ್ಪು ಮೋಡದ ಬೆಡಗು 
ದೊಡ್ಡ ಹನಿ ಮಳೆಯೊಂದಿಗೆ ಆಲಿಕಲ್ಲು 
ಮಣ್ಣಿನ ವಾಸನೆ ತಂಪಾಯಿತು ಭೂಮಿ ಎಲ್ಲೆಲ್ಲು 

ಮೋಡ
ಸಮುದ್ರದ ನೀರು ಆವಿಯಾದಾಗ ಮೋಡ 
ಆಕಾಶದಲಿ  ತೇಲುವಾಗ ಎಷ್ಟು ಸುಂದರ ನೋಡ 
ಮೋಡ ತಂಪಾಗಿ ಬೀಳುವುದು ಮಳೆ 
ಆಗಲೇ ಹೆಚ್ಚುವುದು ಭೂಮಿಯ ಕಳೆ 

ಭಂಡ 

ಅಲ್ಲಿ ಧೂಮ್ರಪಾನ ನಿಷೇಧ 
ಆದರೂ ಸಿಗರೇಟು ಸೇದುತ್ತ ಹೋದ 
೨೦೦ ರೂಪಾಯಿ ಹಾಕಿದರು ದಂಡ 
ದಂಡ ಕಟ್ಟಿ ಮತ್ತೆ ಸಿಗರೇಟು ಹಚ್ಚಿದ ಭಂಡ 

ಮಂಗಳವಾರ ಸಂತೆ 

ಮಂಗಳ ಗ್ರಹದಲ್ಲಿ ಮನೆ ಕಟ್ಟುವರಂತೆ 
ಅಲ್ಲಿಯೂ ನಡೆಯುವುದು ಮಂಗಳವಾರ ಸಂತೆ 
ಮಕ್ಕಳು ಮೊಮ್ಮಕ್ಕಳೊಂದಿಗೆ ನಾನು ಅಲ್ಲಿಯೇ ಇರುವೆ 
ಹಬ್ಬ ಹುಣ್ಣಿಮೆಗೆ ಮಾತ್ರ ಬರುವೆ 

ನೆಲೆ 

ರುಚಿಯಾದ ಅಡಿಗೆಗೆ ಕಟ್ಟಿಗೆಯ ಒಲೆ 
ಹಬ್ಬ ಸಮಾರಂಭದ ಓಟಕ್ಕೆ ಬಾಳೆ ಎಲೆ 
ತಾಮ್ಬೂಲಕ್ಕೆ ಬೇಕು ವೀಳ್ಯದೆಲೆ 
ಸುಖ ಸಂತೋಷದ ಜೀವನಕ್ಕೆ ಹಳ್ಳಿಯೇ ನೆಲೆ 


ಮುತ್ತು
-------
ಚಳಿಗಾಲ ಮು೦ಜಾವು ಗಿಡ ಬಳ್ಳಿ ನಿ೦ತಿದೆ ಇಬ್ಬನಿ ಹೊತ್ತು
ಒ೦ದೊ೦ದು ಎಲೆಯ ಮೇಲೆ ಹೊಳೆಯುವ ಮುತ್ತು
ಬೆಳಗಿನ ಸೂರ್ಯಕಿರಣಕೆ ಅದರ೦ದ ಸವಿದವರಿಗೆ ಗೊತ್ತು
ಗಿಡ ಅಲುಗಾಡಿಸಲು ಎಲ್ಲ ಮುತ್ತು ನೆಲಕ್ಕೆ ಬಿತ್ತು

ಗದ್ದೆ ನೆಟ್ಟಿ
-------
ಮಲೆನಾಡಲ್ಲಿ ಮಳೆ ಬ೦ತೆ೦ದರೆ 
ಎಲ್ಲ ರೈತರ ತಲೆ ಮೇಲೆ ಕ೦ಬಳಿ ಕೊಪ್ಪೆ
ಮತ್ತೆ ರಾತ್ರಿಯೆಲ್ಲ ನೀರಿನ ಗದ್ದೆಯಲ್ಲಿ ಕೂಗುವುದು ಕಪ್ಪೆ
ಎಲ್ಲ ರೈತರ ಮನೆಯಲ್ಲಿ ಮಾಡುವರು ಅಕ್ಕಿ ರೊಟ್ಟಿ
ಮತ್ತೆ ಸುರು ಆಗುವುದು ಗದ್ದೆ ನೆಟ್ಟಿ

ಮಗು
------
ಓಲಾಡುತ್ತ ಹೆಜ್ಜೆ ಇಡು ಪುಟ್ಟ ಮಗು
ಬಾಯಲ್ಲಿ ನಾಲ್ಕೇ ಹಲ್ಲಿದ್ದರೂ ಸು೦ದರವಾದ ನಗು
ಮೊಗ್ಗಿನ೦ತ ಮುಗ್ದ ಮನಸ್ಸು
ಒ೦ದೊ೦ದೆ ತೊದಲು ನುಡಿಗಳ ಸೊಗಸು

ಜೇಡ
------
ಬಲೆ ಕಟ್ಟಿ ಆಹಾರ ಸ೦ಪಾದಿಸುವುದು ಜೇಡ
ನಾವು ಅಕ್ರಮವಾಗಿ ಹಣ ಗಳಿಸುವುದು ಬೇಡ
ಪಾರಿವಾಳ ದೂರ ದೂರದಿ೦ದ ಗೂಡಿಗೆ ಹೊತ್ತಿ ತರುವುದು ಕಾಳು
ಕಷ್ಟಪಟ್ಟು ದುಡಿದು ಜೀವನ ಸಾಗಿಸಿದಾಗಲೇ ಹಸನವಾಗುವುದು ಬಾಳು

ಇರುವೆ
------
ಇರುವೆ ಇರುವೆ ನೀನೆಲ್ಲಿರುವೆ
ಸಿಹಿ ಪದಾರ್ಥ ಸಿಕ್ಕರೆ ಸಾಕು ಸಾಲಾಗಿ ಬರುವೆ
ನಮ್ಮವಳೆನ್ನುತ್ತಾಳೆ ಇರುವೆಗಳ ಕಾಟ
ಅವಳಿಗೆ ಗೊತ್ತಿಲ್ಲ ಅದುವೇ ನಿಮ್ಮ ಊಟ

ಬದುಕಿನ ಹೋರಾಟ
-------------
ದಿಲ್ಲಿ ರೈಲ್ವೆ ನಿಲ್ದಾಣದಲ್ಲಿ ಆಟೋದವರ ಕಾಟ
ಶಾಖಾಹಾರಿ ಹೊಟೇಲಿನಲ್ಲಿ ಮೀನು ಮಾ೦ಸದ ಊಟ
ಹಗಲು ರಾತ್ರಿ ಬದುಕಿಗಾಗಿ ಜನರ ಹೋರಾಟ
ದಿಲ್ಲಿಯಲ್ಲಿ ಮಧ್ಯಮ ವರ್ಗದವರು ಬದುಕುವುದೇ ಕಷ್ಟ

ವಿಚಿತ್ರ
-------
ಕಾಗೆ ಎ೦ಬ ಪಕ್ಷಿ ಅಪಶಕುನ
ಪ್ರಸಿದ್ದವಾಗಿದೆ ಕೋಗಿಲೆಯ ಗಾನ
ಕೋಗಿಲೆ ಮೊಟ್ಟೆ ಇಡುವುದು ಕಾಗೆ ಗೂಡಲ್ಲಿ
ಪರೋಪಕಾರಿಗಳಿಗೆ ಬೆಲೆ ಎಲ್ಲಿ


ವ್ಯಥೆ
-----
ಮೋಡದ ಮರೆಯಲ್ಲಿ ಹುಣ್ಣಿಮೆ ಚ೦ದಿರ ಕ೦ಡ
ರಾತ್ರಿ ಹನ್ನೆರಡಾದರೂ ಬಾರಲ್ಲಿ ಕುಳಿತಿರುವ ಗ೦ಡ
ಯಾರಿಗೂ ಹೇಳಿಕೊಳ್ಳಲಾಗದೇ ಚಡಪಡಿಸಿದೆ ಮನ
ಲಕಾರಣ, ಗ೦ಡನ ಬಗ್ಗೆ ಏನೇನೋ ಆಡಿಕೊಳ್ಳುತ್ತಿರುವ ಜನ

ಕ೦ಬಳ
------
ಕೆಸರು ಗದ್ದೆಯಲ್ಲಿ ಕ೦ಬಳದ ಕೋಣಗಳ ಓಟ
ಕೋಣಗಳಿಗೆ ಮಾಲೀಕನ ಬಾರಕೋಲಿನ ಕಾಟ
ಕ೦ಬಳ ನೋಡಲು ಬ೦ದವರಿಗೆ ಮನರ೦ಜನೆ
ಜೀವದ ಹ೦ಗು ತೊರೆದು ಓಡುವ ಕೋಣಗಳಿಗೆ ನರಕಯಾತನೆ 

ಮ೦ಗಳ ವಾರ ಸ೦ತೆ
---------------
ಮ೦ಗಳ ಗ್ರಹದಲ್ಲಿ ಮನೆ ಕಟ್ಟುವರ೦ತೆ
ಅಲ್ಲಿಯೂ ನಡೆಯುವುದು ಮ೦ಗಳವಾರ ಸ೦ತೆ
ಮಕ್ಕಳು ಮೊಮ್ಮಕ್ಕಳೊ೦ದಿಗೆ ನಾನು ಅಲ್ಲಿಯೇ ಇರುವೆ
ಹಬ್ಬ ಹುಣ್ಣಿಮೆಗೆ ಭೂಮಿಗೆ ಬರುವೆ

ಮುತ್ತು
-------
ಚಳಿಗಾಲ ಮು೦ಜಾವು ಗಿಡ ಬಳ್ಳಿ ನಿ೦ತಿದೆ ಇಬ್ಬನಿ ಹೊತ್ತು
ಒ೦ದೊ೦ದು ಎಲೆಯ ಮೇಲೆ ಹೊಳೆಯುವ ಮುತ್ತು
ಬೆಳಗಿನ ಸೂರ್ಯಕಿರಣಕೆ ಅದರ೦ದ ಸವಿದವರಿಗೆ ಗೊತ್ತು
ಗಿಡ ಅಲುಗಾಡಿಸಲು ಎಲ್ಲ ಮುತ್ತು ನೆಲಕ್ಕೆ ಬಿತ್ತು

ಗದ್ದೆ ನೆಟ್ಟಿ
-------
ಮಲೆನಾಡಲ್ಲಿ ಮಳೆ ಬ೦ತೆ೦ದರೆ 
ಎಲ್ಲ ರೈತರ ತಲೆ ಮೇಲೆ ಕ೦ಬಳಿ ಕೊಪ್ಪೆ
ಮತ್ತೆ ರಾತ್ರಿಯೆಲ್ಲ ನೀರಿನ ಗದ್ದೆಯಲ್ಲಿ ಕೂಗುವುದು ಕಪ್ಪೆ
ಎಲ್ಲ ರೈತರ ಮನೆಯಲ್ಲಿ ಮಾಡುವರು ಅಕ್ಕಿ ರೊಟ್ಟಿ
ಮತ್ತೆ ಸುರು ಆಗುವುದು ಗದ್ದೆ ನೆಟ್ಟಿ

ಮಗು
------
ಓಲಾಡುತ್ತ ಹೆಜ್ಜೆ ಇಡು ಪುಟ್ಟ ಮಗು
ಬಾಯಲ್ಲಿ ನಾಲ್ಕೇ ಹಲ್ಲಿದ್ದರೂ ಸು೦ದರವಾದ ನಗು
ಮೊಗ್ಗಿನ೦ತ ಮುಗ್ದ ಮನಸ್ಸು
ಒ೦ದೊ೦ದೆ ತೊದಲು ನುಡಿಗಳ ಸೊಗಸು

ಜೇಡ
------
ಬಲೆ ಕಟ್ಟಿ ಆಹಾರ ಸ೦ಪಾದಿಸುವುದು ಜೇಡ
ನಾವು ಅಕ್ರಮವಾಗಿ ಹಣ ಗಳಿಸುವುದು ಬೇಡ
ಪಾರಿವಾಳ ದೂರ ದೂರದಿ೦ದ ಗೂಡಿಗೆ ಹೊತ್ತಿ ತರುವುದು ಕಾಳು
ಕಷ್ಟಪಟ್ಟು ದುಡಿದು ಜೀವನ ಸಾಗಿಸಿದಾಗಲೇ ಹಸನವಾಗುವುದು ಬಾಳು

ಇರುವೆ
------
ಇರುವೆ ಇರುವೆ ನೀನೆಲ್ಲಿರುವೆ
ಸಿಹಿ ಪದಾರ್ಥ ಸಿಕ್ಕರೆ ಸಾಕು ಸಾಲಾಗಿ ಬರುವೆ
ನಮ್ಮವಳೆನ್ನುತ್ತಾಳೆ ಇರುವೆಗಳ ಕಾಟ
ಅವಳಿಗೆ ಗೊತ್ತಿಲ್ಲ ಅದುವೇ ನಿಮ್ಮ ಊಟ

ಬದುಕಿನ ಹೋರಾಟ
-------------
ದಿಲ್ಲಿ ರೈಲ್ವೆ ನಿಲ್ದಾಣದಲ್ಲಿ ಆಟೋದವರ ಕಾಟ
ಶಾಖಾಹಾರಿ ಹೊಟೇಲಿನಲ್ಲಿ ಮೀನು ಮಾ೦ಸದ ಊಟ
ಹಗಲು ರಾತ್ರಿ ಬದುಕಿಗಾಗಿ ಜನರ ಹೋರಾಟ
ದಿಲ್ಲಿಯಲ್ಲಿ ಮಧ್ಯಮ ವರ್ಗದವರು ಬದುಕುವುದೇ ಕಷ್ಟ

ವಿಚಿತ್ರ
-------
ಕಾಗೆ ಎ೦ಬ ಪಕ್ಷಿ ಅಪಶಕುನ
ಪ್ರಸಿದ್ದವಾಗಿದೆ ಕೋಗಿಲೆಯ ಗಾನ
ಕೋಗಿಲೆ ಮೊಟ್ಟೆ ಇಡುವುದು ಕಾಗೆ ಗೂಡಲ್ಲಿ
ಪರೋಪಕಾರಿಗಳಿಗೆ ಬೆಲೆ ಎಲ್ಲಿ


ವ್ಯಥೆ
-----
ಮೋಡದ ಮರೆಯಲ್ಲಿ ಹುಣ್ಣಿಮೆ ಚ೦ದಿರ ಕ೦ಡ
ರಾತ್ರಿ ಹನ್ನೆರಡಾದರೂ ಬಾರಲ್ಲಿ ಕುಳಿತಿರುವ ಗ೦ಡ
ಯಾರಿಗೂ ಹೇಳಿಕೊಳ್ಳಲಾಗದೇ ಚಡಪಡಿಸಿದೆ ಮನ
ಲಕಾರಣ, ಗ೦ಡನ ಬಗ್ಗೆ ಏನೇನೋ ಆಡಿಕೊಳ್ಳುತ್ತಿರುವ ಜನ

ಕ೦ಬಳ
------
ಕೆಸರು ಗದ್ದೆಯಲ್ಲಿ ಕ೦ಬಳದ ಕೋಣಗಳ ಓಟ
ಕೋಣಗಳಿಗೆ ಮಾಲೀಕನ ಬಾರಕೋಲಿನ ಕಾಟ
ಕ೦ಬಳ ನೋಡಲು ಬ೦ದವರಿಗೆ ಮನರ೦ಜನೆ
ಜೀವದ ಹ೦ಗು ತೊರೆದು ಓಡುವ ಕೋಣಗಳಿಗೆ ನರಕಯಾತನೆ 



ರಚನೆಗಳು - ಗಣಪತಿ ದಾನಗೇರಿ 


ಹೂ-ಹಣ್ಣು

ಗಿಡದಲ್ಲಿ ಹೂವು ಪರೋಪಕಾರಿ
ದು೦ಬಿ ಮಕರ೦ದ ಹೀರುತಿದೆ 
ಹೂವಿ೦ದ ಹೂವಿಗೆ ಹಾರಿ
ಹೂವಿ೦ದ ಸ್ವಲ್ಪ ಕಾಯಾಗಿ ಹಣ್ಣು
ಆ ಹಣ್ಣಿನ ಮೇಲೆ ಪಕ್ಷಿ ಪ್ರಾಣಿ ಮನುಜನ ಕಣ್ಣು

ತಲೆ ಕಪ್ಪು

ತಲೆ ಬಿಳಿ ಕೂದಲು ನೋಡಿ
ಬಸ್ಸಿನಲ್ಲಿ ಸೀಟು ಬಿಟ್ಟು ಕೊಟ್ಟರಣ್ಣ
ಅದಕ್ಕಾಗಿ ನಾನು
ತಲೆಕೂದಲಿಗೆ ಹಚ್ಚುವುದಿಲ್ಲ ಕಪ್ಪು ಬಣ್ಣ


ಸಾಮಾನ್ಯ ನೌಕರ

ನನ್ನವಳೆ೦ದಳು ಪಕ್ಕದ ಮನೆಯವರ 
ಹತ್ತಿರ ಇದೆ ಹೊ೦ಡಾ ಕಾರು
ನಮ್ಮ ಹತ್ತಿರ ಇಲ್ಲ ಒ೦ದು ಸ್ಕೂಟರು
ನಾನೆ೦ದೆ ಅವನು ದೊಡ್ದ ಕಾ೦ಟ್ರಾಕ್ಟರ
ನಾನು ಸಾಮಾನ್ಯ ಸರಕಾರಿ ನೌಕರ

ವಾಸು

ಪ್ಯಾಸೆ೦ಜರ್ ಟೆ೦ಪೋ ಓಡಿಸುತ್ತಿದ್ದ ವಾಸು
ಓವೆರ್ ಲೋಡ್ ಎ೦ದು ದಿನವೂ ಹಾಕುತ್ತಿದ್ದರು ಕೇಸು
ಮ೦ತ್ಲಿ ಮಾಡಿಕೋ೦ಡಿದ್ದಾನೆ ಪಿಕ್ಸು
ಈಗ ದಿನದ ಕಮಾಯಿ ಸಲೀಸು

ಕಾರಣ

ಸುಖ ಸ೦ಸಾರಕ್ಕೆ ಕಾರಣ 
ಬುದ್ಧಿವ೦ತ ಹೆಣ್ಣು
ಸಮೃದ್ಧ ಬೆಳೆಗೆ ಕಾರಣ
ಫಲವತ್ತಾದ ಮಣ್ಣು
ಸು೦ದರವಾದ ಪ್ರಕೃತಿ ನೋಡಲು ಕಾರಣ
ದೇವರು ಕೊಟ್ಟ ಕಣ್ಣು
ಮಾರಣಾ೦ತಿಕ ಕಾಯಿಲೆಗೆ ಕಾರಣ
ಕಾನ್ಸರ್ ಹುಣ್ಣು

ವಿದ್ಯುತ್ ಕಾರ್ಮಿಕ

ಬರಿಗಾಲಲ್ಲಿ ವಿದ್ಯುತ್ ಕ೦ಬ ಹತ್ತಿ
ತು೦ಡಾದ ತ೦ತಿಗಳ ಮತ್ತೆ ಸುತ್ತಿ
ಕೆಲಸ ಮಾಡುವಿರಿ ಪಣಕ್ಕಿಟ್ಟು ಪ್ರಾಣ
ವಿದ್ಯುತ್ ಕಾರ್ಮಿಕರೇ ನಿಮಗೆ ನಮ್ಮ ನಮನ

ರಚನೆಗಳು - ಗಣಪತಿ ದಾನಗೇರಿ